ಬೆಂಗಳೂರಿನಲ್ಲಿ ಮಳೆ ಬಂದ್ರೆ ಶುರುವಾಗುವ ಸಮಸ್ಯೆಗಳು ಒಂದೆರಡಲ್ಲ ಬಿಡಿ.. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗೋದು, ರಸ್ತೆಗಳೆಲ್ಲಾ ಮಿನಿ ಕೆರೆಗಳಂತೆ ಆಗುತ್ತವೆ. ಮಳೆ ಬಂದ್ರೆ ಸಾರ್ವಜನಿಕರಿಗೆ ಮನೆ, ರಸ್ತೆ ಅಲ್ಲ ಬಸ್ ತಂಗುದಾಣಗಳಲ್ಲೂ ನೆಮ್ಮದಿ ಇಲ್ಲ ನೋಡಿ. ಆದ್ರೆ ಸರಿಯಾದ ನಿರ್ವಹಣೆ ಮಾಡದೇ ಈಗ ಬಸ್ ನಿಲ್ದಾಣಗಳು ಪಳೆಯುಳಿಕೆಗಳಂತೆ ಕಾಣುತ್ತಿದೆ.. ಮಳೆ ಬಂದ್ರೇ ಜನ ಕೂತುಕೊಳ್ಳೋದು ಇರಲಿ, ನಿಂತುಕೊಳ್ಳೋದಕ್ಕೂ ಆಗೋಲ್ಲ.. ಮೇಲ್ಚಾವಣಿಗಳು ತುತ್ತು ಬಿದ್ದಿದ್ರೇ ಕೆಲ ಕಡೆ ಮೇಲ್ಚಾವಣಿಯೇ ಇಲ್ಲ. ಚೆರ್‍ಗಳಂತೂ ಹೇಳೋದೇ ಬೇಡ.. ಆದ್ರೆ ಬಿಬಿಎಂಪಿ ಗುತ್ತಿಗೆ ನೀಡಿರೋ ಜಾಹಿರಾತು ಫಲಕಗಳು ಮಾತ್ರ ಸೂಪರ್ ಆಗಿ ಕಾಣುತ್ವೆ.. ಈ ಬಗ್ಗೆ ನಮ್ಮ ಪ್ರತಿನಿಧಿ ಮಾರುತಿ ಬೆಳ್ಳೂರು ರಿಯಾಲಿಟಿ ಚೆಕ್ ಮಾಡಿದ್ದಾರೆ.. ನೋಡೋಣ..
#PublicTV #HRRanganath #NewsCafe